ಮಾನಸ ಮೂವೀಸ್ ಲಾಂಛನದಲ್ಲಿ ವಿ.ಶೇಖರ್ ಅವರು ನಿರ್ಮಿಸಿರುವ ‘ಮಸ್ತ್ ಮೊಹಬ್ಬತ್ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಮೋಹನ್ ಮಾಳಗಿ ನಿರ್ದೇಶನದ ಈ ಚಿತ್ರದ ನಾಯಕರಾಗಿ ಪ್ರೇಂ(ನೆನಪಿರಲಿ) ನಟಿಸಿದ್ದಾರೆ. ಪೂನಂ ಬಜ್ವ, ಚಿಕ್ಕಣ್ಣ, ನವೀನ್ಕೃಷ್ಣ, ರಾಜು ತಾಳಿಕೋಟೆ, ಶಕೀಲ, ಸ್ವಯಂವರ ಚಂದ್ರು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಮನೋಮೂರ್ತಿ ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಜಯಂತ ಕಾಯ್ಕಿಣಿ, ಕೆ.ಕಲ್ಯಾಣ್ ಹಾಗೂ ರಘು ಶಾಸ್ತ್ರಿ ಬರೆದಿದ್ದಾರೆ. ವಿಜಯ್ ಸಿ ಕುಮಾರ್(ಹ್ಯಾಪಿ ಡೇಸ್ ಖ್ಯಾತಿ) ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ‘ಮಸ್ತ್ ಮಹೊಬ್ಬತ್ ಚಿತ್ರಕ್ಕಿದೆ.